ಶುಕ್ರವಾರ, ಅಕ್ಟೋಬರ್ 21, 2016

" ಕನಸಲಿ ಕಳೆದಿರುವೆ.." - ಕವನ 5




ನಿದಿರೆಯೇ ಬಾರದ ಈ ಕಣ್ಣಲಿ
ಕನಸೊಂದ ನಾ ಕಂಡಿರುವೆ…

ಕನಸ ಕಂಡ ಮರುಕ್ಷಣವೇ
ಅದರೊಳಗೆ ನಾ ಕಳೆದಿರುವೆ…

ಕನಸೇ ನೀ ಛಲವ ಬಿಡದೆ
ನಾ ಎಲ್ಲವ ತೊರೆದಿರುವೆ…

ಕನಸ ಲೋಕವ ನನಸ ಮಾಡಲು
ನಾ ನನ್ನೆ ಕಾಡಿರುವೆ…

ಬದುಕೆಂಬ ಈ ಪಯಣದ ಬೆರಗಿಗೆ
ನಾ ಎಲ್ಲವ ಮರೆತಿವೆ..

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ