ಮಂಗಳವಾರ, ಅಕ್ಟೋಬರ್ 4, 2016

“ಮಳೆಗಾಲದ ಸಂಭ್ರಮ” - ಕವನ 3




ಗುಡುಗು-ಸಿಡಿಲುಗಳ ಸದ್ದ ಕೇಳಲು
ಆಯಿತು ಮನದಲ್ಲೊಂದ ಕಂಪನ…
ಆ ಮಿಂಚಿನ ರಭಸದ ಹೊಡೆತಕೆ
ಈ ಧರೆಯೇ ನಿನಗಾಗಿ ತಲ್ಲಣ…

ಸೂರ್ಯನು ಹೆದರಿ ಮರೆಯಾದನು
ಕಾರ್ಮೋಡವಲ್ಲವೇ ಇದಕ್ಕೆ ಕಾರಣ…
ಬೀಸೋ ಗಾಳಿಯು ಸುತ್ತಾಡಲು
ತಗರೆಲೆಗಳು ಸಿಲುಕಿ ಮರಣ…

ಮಳೆಹನಿಗಳು ಮುತ್ತಿಡಲು ಈ ನೆಲವನ
ಹಸಿಹಸಿರಾಗಿ ಕೂಡಿತು ತನುಮನವು…
ನಿನ್ನ ಬಣ್ಣಿಸಲಾಗದೆ ಈ ಕವನ
ಬರೆಯುತ ಮರೆತೆನು ಪ್ರತಿಕ್ಷಣವು…

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ