ನಿದಿರೆಯೆಂಬ ಲೋಕದಲಿ
ನಡೆಯುತ್ತಿದೆ ಹೊಸ ತಿರುವುಗಳು..
ನಡುಗನಸಿನ ಪಾತ್ರದೊಳಗೆ
ನನ್ನನ್ನೊಮ್ಮೆ ಯಾರೋ ಕರೆವರು..
ಕಣ್ತೆರೆದು ನೋಡುತ್ತಿರಲು
ಹೊಸಜಗವ ನಾ ಕಂಡಿಹೆನು..
ಎಲ್ಲೋ ನೋಡಿರುವ ಈಜಗವು
ಹೊಸಬೆಳಕಲಿಂದು ಬೆರೆತಿಹುದು..
ಅಂದು ಕಂಡ ಇದೇ ಭುವಿಯು
ಮಂಜಾ ಮನದಿ ಮೂಡಿಹುದು..
ನಯನಗಳೆರಡು ಮಾಡಿವೆಯೊ ಮೋಡಿ
ನವಲೋಕದಂತಿಂದು ಕಾಣುವುದು..
ಮತ್ತೆ ಮರಣ ಮತ್ತೆ ಜನುಮ
ಪ್ರತಿದಿನವು ನಡೆವುದು..
ಕನಸು ನಿಜವೋ, ಕಣ್ತೆರೆದರೆ ನಿಜವೋ
ತಿಳಿಯದೆ ಮನವು ಕೊರಗುವುದು..
ಹೊಸಲೋಕದಿಂದ ಮತ್ತೆ ಮರಣ
ನಿದಿರೆಯಲೇ ನಾ ಕಳೆದೆನು..
ಮರುಜನನವು ಸಿಗುವುದೊ ನಾತಿಳಿಯೇ
ನಂಬಿಕೆಯೊಂದೆ ಇಲ್ಲಿ ಉಳಿದಿಹುದು..
....ಕನಸು ನಿಜವೋ, ಕಣ್ತೆರೆದರೆ ನಿಜವೋ
ಪ್ರತ್ಯುತ್ತರಅಳಿಸಿತಿಳಿಯದೆ ಮನವು ಕೊರಗುವುದು..
.
Lucia part 2
ಸೂಪರ್ ಸರ್
ಪ್ರತ್ಯುತ್ತರಅಳಿಸಿ