ಕಂಪನಾ ನನ್ನಲಿ
ನವಿರಾಗೋ ನೆನಪುಗಳು ಈಕ್ಷಣದಲಿ ..
ಮೂಡಿದೇ ನಗುವಲಿ
ನೆನೆದು ಮರೆಯಾದೆನು ಒಂಟಿ-ಬದುಕಲಿ..
ತುಂಬಿದೆ ಚಿಲಿಪಿಲಿ
ಮೋಡಿಮಾಡಿದೆ ಹಕ್ಕಿಗಳು ಬಾನಲಿ..
ಪ್ರಕೃತಿಯ ಸೊಭಗಲಿ
ಸಂತೋಷವು ತೇಲಿದೆ ಒಂಟಿ-ಬದುಕಲಿ..
ಮಳೆಹನಿ ನೆಲಬಳಿ
ಹಸಿರಾಗಿದೆ ಭುವಿಯ ಮೈಯಲಿ..
ಭಾವನೆಗಳು ಕಣ್ಣಲಿ
ನೆನೆದಷ್ಟು ಖುಷಿಯೂ ಒಂಟಿ-ಬದುಕಲಿ..
ತೃಪ್ತಿಯು ಎದೆಯಲಿ
ಇನ್ನೇನು ಬೇಕು ಈ ಬಾಳಲಿ..
ಬೆರೆತಿಹೆ ಈ ಹಾಡಲಿ..
ಮಧುರಾ ಕಲ್ಪನೆಗಳು ಒಂಟಿ-ಬದುಕಲಿ..
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ