ಮಂಗಳವಾರ, ಜುಲೈ 3, 2018

"ಕಾಗದ ದೋಣಿ" ಆಂಡ್ರೋಯ್ಡ್ ಅಪ್ಲಿಕೇಶನ್ ಬಳಸಿ

ಸ್ನೇಹಿತರೇ,
"ಕಾಗದ ದೋಣಿ" ಓದುವುದು ಈಗ ಮತ್ತಷ್ಟು ಸುಲಭವಾಗಿದ್ದು ನಮ್ಮ ಹೊಸ "ಕಾಗದ ದೋಣಿ" ಆಂಡ್ರೋಯ್ಡ್ ಅಪ್ಲಿಕೇಶನ್ ಬಳಸಿ ನಿಮ್ಮ ಮೊಬೈಲ್ ನಲಿ.

ಇಲ್ಲಿ ದೊರೆಯುವುದು

ಶನಿವಾರ, ಜೂನ್ 23, 2018

ಮಳೆ "ಕಾಲ - ಚಕ್ರ" - ಕವನ 12


ಓ ಸುಡುವ ಸೂರ್ಯನೇ
ನಿನಗೇಕೆ ಕೋಪವೇ ...
ಬಿಸಿಲ ಬೇಗೆ ನೆಲಕೆ ಬಡಿದು
 ಭೂತಾಯಿಯು ನರಳಿದೆ ...

ಓ ಮರಗಿಡ ಬೆಟ್ಟವೇ
ಸುಮ್ಮನೇಕೆ ನಿಂತಿರುವೇ ...
ನೀವು ತಡೆಯದ ತಂಗಾಳಿ
ಊರಬಿಟ್ಟು ಮರೆಯಾಗಿದೆ ...


ಓ ಅಲೆಮಾರಿ ಗಾಳಿಯೇ
ಎನ ವಿಳಾಸವ ಮರೆತೆಯೇ ...
ಕರೆದುಕೊಂಡು ಬಾರೊ ಒಮ್ಮೆ
ಬಿಳಿಮೋಡಗಳ ಹಿಂಡನೇ ...

ಓ ಬೆಳ್ಳಿ ಮೋಡವೇ
ಭೂತಾಯಿಯು ಬೇಡವೆ ...
ಬಿಸಿಲಬೇನೆಗೆ  ನರಳೋ ನೋಡಿ
ಕಣ್ ಮಳೆಹನಿಗಳ ಸುರಿಸಿರೆ ...

ಓ ಮಳೆಹನಿಗಳ ಮಾಲೆಯೇ
ನನ್ನ ದೂರ ತಿಳಿಯದೆ ...
ನಿನ್ನ ಬೆರೆತು ಈ ನೆಲವು
ಹಸಿರು ಹಸಿರಾ ಪಸರಿಸೆ ...

ಯಾವುದೊ ಈ ಮಾಯೆಯೋ
ಬಿಸಿಲು ಮಳೆಯ ಜಾಲವೋ ...
ಮಳೆ "ಕಾಲ - ಚಕ್ರ"ದೊಳಗೆ
ಉಕ್ಕಿ ಹರಿಯಲಿ ಏನ ಭಾವನೇ ..

ಗುರುವಾರ, ಮಾರ್ಚ್ 15, 2018

“ಸೋಮಾರಿ ಗಾನ” - ಕವನ 11



ಹೊತ್ತು ಕಳೆದರೇನಂತೇ 
ಜೊತೆಗೆ ಬರುವನು ಅವನು ..
ಸುತ್ತ ಇರುವವರ ತಿಳಿಯದೆ
ಎನಬೆನ್ನ ಬಿಡನು ಇವನು ..

ರವಿ ಬಂದರೇನಂತೇ
ಅವನಿಲ್ಲವೇ ನನಗಿಂದು ..
ಹೊತ್ತು ಕಳೆದರೂ ಹೋಗಲಿ
ಹೊಟ್ಟೆಗಿಟ್ಟು ಕೂಡ ಮರೆವೆನು ..

ಸ್ವಚ್ಛವಿಲ್ಲ ಎಂದರೇನಂತೇ
ಬೆಚ್ಚ ಮಲಗ ಬೇಕಿನ್ನು ..
ಎದ್ದು ಹೊರಡಬೇಕೆಂದರೆ
ಮುಗ್ಗರಿಸಿ ಬೀಳುವೆ ನಿನಬಲೆಗೆಂದು ..

ಅರ್ಧ ದಿನವು ನಿನದಾದರೇನಂತೇ
ನಾನಲ್ಲವೆ ನಿನ ಗುಲಾಮನು ..
ಯಾವ ಕೆಲಸವನೇಕೆ ಮಾಡಲಿ 
"ಸೋಮಾರಿ" ಎಂದೇಳುವೆ ನಿನ್ನ ಹೆಸರನು ..

ಭಾನುವಾರ, ಫೆಬ್ರವರಿ 18, 2018

“ಗಾಳಿ ಮಾತು” - ಕವನ 10





ಕಣ್ಣ ಸಿಲುಕದ ಗಾಳಿಯೊಂದು
ನುಸುಳಿ ಮನೆಗೆ ಬಂದಿದೆ..
ದಾರಿ ಮರೆತು ಬಂದಂತಿದೆ
ತರಗೆಲೆಗಳು ಅದರ ಜೊತೆಗೆಯೇ..

ಬಟ್ಟೆ ಬರೆಯು ಪುಟಗಳೆಲ್ಲ
ಹೆದರಿಕೊಂಡು ಓಡಿವೆ..
ಇದರ ಸ್ವಾಗತ ಬಯಸಿಕೊಂಡು
ಮರಗಿಡಗಳು ಬಾಗಿವೆ..

ಹಕ್ಕಿ ಹುಳುಗಳು ನಿನ್ನ ಬಗೆಯೆ
ಚೀರಿಕೊಂಡು ಸುತ್ತಿವೆ..
ನಿನ್ನ ತಂಪು ಮಾಡಲೆಂದೆ
ಮಳೆಹನಿಗಳು ಉದಿರಿವೆ..

ನಿನ್ನ ದಯೆಯೊ ನಿನ್ನ ಮಾಯೆಯೊ
ನನಗೊಂದೂ ತಿಳಿಯದು..
ನಿನ್ನ ನಂಬಿಕೊಂಡ ಜಗವು
ಬದುಕುವುದನ್ನ ಕಲಿತಿದೆ..