ಮಂಗಳವಾರ, ಡಿಸೆಂಬರ್ 27, 2016

Video : Mehebani - Beauty of Nature (ಮೆಹೆರ್ಬಾನಿ - ನಿಸರ್ಗದ ಸೌಂದರ್ಯತೆ)


ಸುಂದರ ನಿಸರ್ಗದ ನಡುವಿನ ನನ್ನ ಪ್ರಯಣದ ಕುರಿತು ಇದೊಂದು ಲಘು ಚಲನಚಿತ್ರ.
ಹಾಡು : ಮೆಹೆರ್ಬಾನಿ (ಸಿನಿಮಾ : ದ ಶಾಕೀನ್ಸ್)

This is a short video about my journey between beautiful nature.

Song : Meherbani (Movie : The Shaukeens)

ಗುರುವಾರ, ಡಿಸೆಂಬರ್ 22, 2016

“ನೋಡಬನ್ನಿ ನಮ್ಮೂರ” - ಕವನ 7




ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವ
ಇದ ನೋಡಬಯಸಿದ ಆ ಬಾನ ಸೂರ್ಯ…
ಎಲ್ಲೆಲ್ಲೂ ತುಂಬಿರುವುದು ಉದುರುವ ಮಂಜಿನಸರ
ಇದರ ಸೆರೆಯಲಿ ಬಾರದೆ ರವಿಕಿರಣವು ಮಾಯ…

ಕೋಳಿಯ ಕೂಗಿಗೆ ಶುರುವಾಗುವುದು ನನ್ನ ಪ್ರತಿದಿನ
ಎನಮೇಲೆ ಮಲಗಿರುವುದು ಬೆಕ್ಕು, ಮುದುರಿಕೊಂಡು ಬಾಲವನ್ನ…
ಬಾಗಿಲ ತೆಗೆದರೆ ಕಂಡಿತು ಮಂಜಲಿ ಕೂಡಿದ ಸ್ವರ್ಗಬನ
ಆಹಾ! ಎಂತಹ ಜನುಮ ನನ್ನದು, ಮರೆತೆನು ಆಕ್ಷಣ…

ಕರುವು ಆಡುವುದು ಕೊಟ್ಟಿಗೆಯಲಿ ಹಸುವ ಸುತ್ತಿಬಂದು
ಇದನೋಡಿ ನಾಯಿಯು ಬಾಲವಾಡಿಸಿತು ಬೊಗಳಿಕೊಂಡು…
ತಣ್ಣನೆ ಗಾಳಿಚಲನೆಗೆ ಮರಗಿಡಗಳು ನಡುಗಿತು ಚಳಿಗೆಂದು
ದೋಸೆಯ ಮಾಡುತ್ತಿರುವಳು ನನ್ನಮ್ಮ, ಆಕಾಶವಾಣಿಯ ಕೇಳಿಕೊಂಡು…

ಸಿಗದಿನ್ನೊಂದು ಜನ್ಮ, ನೋಡಬನ್ನಿ ನಮ್ಮೂರ
ಮಲೆನಾಡ ಹಸಿರಸಿರಿಯಲಿ ಬೇಸರವೆಂಬುದು ತುಂಬಾದೂರ…
ಕಾಫಿ-ಚಹಾ ಮೆಣಸು, ಮರ ಗಿಡಗಳ ಸರದಾರ
ಕವಿಯ ಮಾಡಿತು ಎನ್ನ, ಇದ ನೆನೆದರೆ ಸಡಗರ…

ಬುಧವಾರ, ಡಿಸೆಂಬರ್ 21, 2016

"ಬ್ರೇಕ್ ಫಾಸ್ಟು" - (ಬತ್ತಿ - ೧)



ಬೆಳಗಿನ ಜಾವ ಗಂಟೆ ಎಂಟಾದಾಗ,
ಕೆಲಸಕೆ ಹೊರಡುವ ತವಕ,
ಆಚೆಗೆ ಈಚೆಗೆ ಹೋಗಿ, ಶರ್ಟು ಪ್ಯಾಂಟು ಧರಿಸಿ,
ಹೊರಟು ನಿಂತಾಗ, ಬಸ್ಸು ಬರಲು ಇದೆ ಕೇವಲ ಹತ್ತು ನಿಮಿಷ ಸಮಯ.

ಹೊಟ್ಟೆ ಚುರುಗುಟ್ಟುತಿದೆ,
ಬೆಳಗಿನ ಹಸಿವು ರೌದ್ರಾವತಾರವನ್ನಾಡುತಿದೆ,
ಬೇಗ ಎದ್ದು ಚಪಾತಿಯೋ, ಅವಲಕ್ಕಿಯೋ ಮಾಡೋಣವೆಂದುಕೊಂಡಿದ್ದೆ,
ಲೇಟಾಗಿ ಎದ್ದಿದರಿಂದ ಏನು ಅಂದುಕೊಂಡಿದ್ದೆ ಎಂದು ಎಣಿಸುವ ಸಮಯವೂ ಇಲ್ಲದಾಗಿದೆ.

ಅದೇನು ಮಹಾ.. ಕಂಪನಿಯಲ್ಲಿ ತಿಂಡಿ ಸಿಗುತ್ತಲ್ಲ ಎಂದ ಒಬ್ಬ ಭೂಪ,
ಹೌದಪ್ಪ.. ಆದರೆ ನನ್ನ ಕಷ್ಟ ನಾನೆ ಬಲ್ಲೆ ಪಾಪ.
ಸಿಂಪಲ್ಲಾಗೆ ಹೇಳುವುದಾದರೆ ಕಂಪನಿಯಲ್ಲಿ ಸಿಗುವ ತಿಂಡಿ ನನ್ನ ಬಾಯಿಗೆ ಹಿಡಿಸಲ್ಲ,
ದೋಸೆ, ನೀರ್ ದೋಸೆ ತಿಂದು ತೇಗಿದ ಹೊಟ್ಟೆ ಸಮೋಸ, ಬಜಿಯ ಸಹಿಸಲ್ಲ.

ಗೌತಮ ಹೇಳಿದ್ದ ಆಸೆಯೇ ದುಃಖಕ್ಕೆ ಮೂಲ,
ನನಗಂತು ಸದ್ಯಕ್ಕೆ ನನ್ನ ಹಸಿವಿನ ಆಳವೇ ಅದನೆಲ್ಲವಮೀರಿದ ಮೂಲ.
ಖಾಲಿ ಹೊಟ್ಟೆಯಲಿ ಮಧ್ಯಾಹ್ನದವರೆಗೂ ಸಮಯ ಕಳೆಯಬೇಕಾದ ಸ್ಥಿತಿ,
ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ನನಗೆ ಉಳಿದಿರುವ ಗತಿ.

ದಿನ ಸಮಯ ಕಳೆದಿದ್ದರೂ ಬಸ್ಸು ಬಂದಿರಲಿಲ್ಲ ,
ಹಾಗಂತ ಹೇಳಿ ನಾವು ಸುಮ್ಮನೆ ನಿಂತುಕೊಳ್ಳುವವರಲ್ಲ ,
ಸುತ್ತ ಮುತ್ತ ಹಾರಾಡುವ ಹಕ್ಕಿಗಳ ಸೊಭಗನು ಸವಿಯುವ ಅವಕಾಶವನ್ನು ಕಳೆದುಕೊಳ್ಳುವವರಲ್ಲ,
ದಿನದಿಂದ ನನ್ನ ಬೆಳಗಿನ ಹೊಟ್ಟೆ ಹಸಿವಿನ ವಿಧಿಯು ಬದಲಾಗುವುದೆಂದು ನನಗೂ ತಿಳಿದಿರಲಿಲ್ಲ.


ಒಂದು ದಿನ ಬಂದಿದ್ದ ಒಬ್ಬ ಅಣ್ಣ
ಸುಮಾರಾಗಿತ್ತು ಅವನ ಬಣ್ಣ,
ಅವನ ಬಳಿ ಇತ್ತು  ಒಂದು ಮಹಾ ಪಾತ್ರೆ,
ಪಾತ್ರೆಯ ಬಾಯಿ ತೆರೆದಾಗ ಅಲ್ಲೇ ಆಗಿತ್ತು ನಮ್ಮ ಕಣ್ಮನಸಿಗೆ  ಒಂದು ಲಘು ಜಾತ್ರೆ.

ಪಾತ್ರೆಯಲ್ಲಿತ್ತು ಇಡ್ಲಿ ... ವಡಾ ...
ಅದನ್ನು ನೋಡಿದ್ದೆ ತಡ,
ಬಂದಿತ್ತು ನಮ್ಮ ಬಾಯಲ್ಲಿ ನೀರು ಒಂದು ಕೊಡ.

ಮೊದಲು ನನ್ನ ಗೆಳೆಯ ಮುನ್ನೆಜ್ಜೆಯಿಟ್ಟ ತಣಿಸಲು ಆತನ ಹೊಟ್ಟೆಯ ಬರ,
ತಿಂಡಿಯ ಬಗೆ ವಿಚಾರಿಸಿ ಕೇಳಿದಹೇಗಿದೆಯಣ್ಣ ಇದರ ದರ?
ಆತ "ಹತ್ತು (೧೦) ರುಪಾಯಿಗೆ ಮೂರು () ಇಡ್ಲಿ ಅಥವಾ ಎರಡು () ವಡ", ಎಂದ ಬಳಸಿ ಅವನ ಗಡುಸಾದ ಸ್ವರ,
ಇದನ್ನು ಕೇಳಿದ ನಮಗಂತು ಲಭಿಸಿತ್ತು  ಸ್ವರ್ಗ, ಬರೇ ಮೂರೇ ಮೂರು ಇಂಚು ದೂರ.

ಅಂದಿನಿಂದ ಖಾಯಂ ಆಗಿತ್ತು ನಮ್ಮ ಬೆಳಗ್ಗಿನ  ಬ್ರೇಕ್ ಫಾಸ್ಟು
ಇಡ್ಲಿ ಜೊತೆ ತೆಂಗಿನ ಚಟ್ನಿ.. ಆಹಾ .. ಟೆಸ್ಟೋ ಟೆಸ್ಟು.
ನಾವು ಬಯಸಿದ ತಿಂಡಿ ನಮ್ಮನ್ನು ಹುಡುಕಿ ಬಂದಿತ್ತು,
ಬೆಳಗಿನ ಖಾಲಿ ಹೊಟ್ಟೆಯ ಕೊರಗು ಈಗ ಮರೆಯಾಗಿತ್ತು.

ಇಷ್ಟು ದಿನ ಮನಸಿಲ್ಲದ ಮನಸಲಿ ಎದ್ದು ಲೇಟಾದರೆ ಬಸ್ಸು ತಪ್ಪುತ್ತಿತ್ತು
ಆದರೆ ಈಗ ಲೇಟಾದರೆ ಬಸ್ಸಿನ ಮೊದಲು ಇಡ್ಲಿ ತಿನ್ನುವ ಅವಕಾಶ ತಪ್ಪುತ್ತಿತ್ತು,
ಮೊದಲು ಕೆಲಸಕೆ ಹೋಗುವ ಅನಿವಾರ್ಯತೆ ನಮ್ಮನ್ನು ಎಳೆಯುತ್ತಿತ್ತು,
ಆದರೆ ಈಗ ಇಡ್ಲಿ ತಿನ್ನುವ ಹಂಬಲ ನಮ್ಮನ್ನು ಸಳೆಯುತಿತ್ತು.

 ಈಗಂತು ನಡುನಡುವೆ ಇಡ್ಲಿ ಅಣ್ಣ ಬರದೇ ಹೋದರೆ ಆಕಾಶವೇ ಕಳಚಿ ಬಂದಂತಾಗುತ್ತದೆ,
ನಮ್ಮಲ್ಲಿ ಕೆಲವರಿಗಂತು ಕಂಪನಿ ಕೆಲಸಗಿಂತ ಬೆಳಗಿನ ಇಡ್ಲಿಯೇ ಮುಖ್ಯವಾಗಿದೆ.
ಅಷ್ಟಕ್ಕೂ ನೀವೇ ಹೇಳಿ ಇಡೀ ದಿನ ಲವಲವಿಕೆಯಿಂದಿರಲು ಯಾವುದು ಬೇಕು ಫಸ್ಟು ?
ಅಲ್ವೇ ಅದು ರುಚಿಯಾದ ಆರೋಗ್ಯಕರ ಹೊಟ್ಟೆ ತುಂಬಿಸುವ ಬ್ರೇಕ್ ಫಾಸ್ಟು ?


-ಲ್ಯಾಂಡಲ್.