ಗುರುವಾರ, ಸೆಪ್ಟೆಂಬರ್ 22, 2016

"ಓ ಬಾಲ್ಯವೇ.." : ಕವನ 2


ಮಣ್ಣಿನಲಿ ಮನೆಯ ಮಾಡಿ
ಮಳೆಯಲಿ ಕುಣಿದಿರುವೆ....
ಹಣವೆಂಬುವ ಮರವನೇರಿ
ನೆಲವನ್ನ ಮರೆತಿರುವೆ....

ಓ ಬಾಲ್ಯವೇ.. ನಾ ನಿನ್ನ ಕಳೆದಿರುವೆ..

ಮರದ ಚಕ್ರದ ಗಾಡಿಯ ಮಾಡಿ
ಜಗವನ್ನೇ ಪಯಣಿಸಿರುವೆ....
ಅಹಂಕಾರವೆಂಬ ಶಿಖರವೇರಿ
ನನ್ನದೆಂಬುವನು ಕೊಂದಿರುವೆ....

ಓ ಬಾಲ್ಯವೇ.. ನಾ ನಿನ್ನ ತೊರೆದಿರುವೆ..

ಹಾರುವ ಗಾಳಿಪಟವ ಹಿಡಿದು
ಗಗನವನ್ನೇ ಚುಂಬಿಸಿರುವೆ....
ಗುರಿಯ ತಲುಪುವ ದುರಾಸೆಯಿಂದ
ಸ್ವಾರ್ಥದ ಕಡಲಲಿ ಬೆರೆತಿರುವೆ....

 ಓ ಬಾಲ್ಯವೇ.. ನಾ ನಿನ್ನ ಮರೆತಿರುವೆ..

ಶನಿವಾರ, ಸೆಪ್ಟೆಂಬರ್ 17, 2016

ಅವನಲ್ಲಿ ನನ್ನೊಂದು "ಪ್ರಾರ್ಥನೆ" : ಕವನ 1


ಹೇಗೆ ಕಳೆಯಲಿ ಈ ಜೀವನವ..
ತಿಳಿಯದಂತಾಗಿದೇ ನನ್ನದೆಂಬುವ ಗುರಿಯ....
ನೆನೆಯುತ್ತಲೇ ಕಳೆಯುತ್ತಿರುವೆ ನಾ ಪ್ರತೀ ದಿನವ..
ಸಿಗಬಾರದೇ ಇದಕ್ಕೆಲ್ಲ ಒಂದು ತಿರುವ..

ಓ ದೇವರೇ.. ಬಾ ಬೇಗನೇ....

ಕರಗದೇ ಕೇಳಿ ನಿನ್ನ ಆ ಹೃದಯ..
ತಿಳಿಯುತ್ತಿಲ್ಲವೇ ನಿನಗೆ ನಮ್ಮೆಲ್ಲರ ನೋವ....
ಬೆಳಗು ಬೇಗನೆ ಬಂದು ಈನಮ್ಮ ಮನವ..
ನೀನಲ್ಲವೇ ಈ ಧರೆಗೆ ಒಡೆಯ....

ಓ ದೇವರೇ.. ಇದೇ ನನ್ನ ಪ್ರಾರ್ಥನೆ....